Skip to playerSkip to main contentSkip to footer
  • 4/29/2020
ಉಪವಾಸದ ತಿಂಗಳು ಎಂದೇ ಪರಿಗಣಿಸಲ್ಪಟ್ಟಿರುವ ರಮಧಾನ್ ತಿಂಗಳು (ಪವಿತ್ರ ಗ್ರಂಥ ಕುರಾನ್ ಪ್ರಕಾರ ಸರಿಯಾದ ಉಚ್ಛಾರಣೆ ರಮಧಾನ್, ಆದರೆ ಉಚ್ಚರಿಸಲು ಸುಲಭ ಎಂದು ರಂಜಾನ್ ಎಂದೂ ಕರೆಯುತ್ತಾರೆ) ಉಪವಾಸಕ್ಕಿಂತಲೂ ಮನಸ್ಸನ್ನು ಹಿಡಿತದಲ್ಲಿರಿಸಿಕೊಳ್ಳುವುದಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ. ರೋಜಾ ಎಂದರೆ ಕೇವಲ ಊಟವನ್ನು ಮಾಡದೇ ಹಸಿವಿನಿಂದಿರುವುದು ಮಾತ್ರವಲ್ಲ, ರೋಜಾ ಇರುವ ಹೊತ್ತಿನಲ್ಲಿ ಮನಸ್ಸನ್ನು ಯಾವುದೇ ಪ್ರಲೋಭನೆಗಳಿಗೆ ಒಡ್ಡದಂತೆ ದೃಢವಾಗಿರಿಸಿಕೊಳ್ಳುವುದೇ ನಿಜವಾದ ಉಪವಾಸ. ಉದಾಹರಣೆಗೆ ನೆನಪಿಲ್ಲದೇ ಊಟ ಮಾಡಿಬಿಟ್ಟರೂ ಉಪವಾಸ ಅಸಿಂಧುವಾಗುವುದಿಲ್ಲ, ಆದರೆ ನೆನಪಿದ್ದೂ ರೋಜಾ ಅವಧಿಯಲ್ಲಿ ಮನಸ್ಸಿನಲ್ಲಿಯೇ ಬಿರಿಯಾನಿ ತಿಂದಂತೆ ಕಲ್ಪಿಸಿ ಬಾಯಿಯಲ್ಲಿ ನೀರೂರಿದರೆ ಉಪವಾಸ ಅಸಿಂಧುವಾಗುತ್ತದೆ. ಒಂದು ತಿಂಗಳಿಡೀ ಸೂರ್ಯೋದಯಕ್ಕೂ ಮುನ್ನಾಸಮಯದಿಂದ ತೊಡಗಿ ಸೂರ್ಯಾಸ್ತ ಸಮಯದವರೆಗೂ ಉಪವಾಸ ಇರುವ ಮೂಲಕ ಪಡೆಯುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಅರಿಯೋಣ.

Recommended